Monday, December 27, 2010

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು..


ಚಿತ್ರ: ಸೈಕೊ
ಸಂಗೀತ: ರಘು ದೀಕ್ಷಿತ್
ಹಾಡಿರುವವರು: ಹರಿಚರಣ್, ಸೈಂಧವಿ
ಚಿತ್ರಸಾಹಿತಿ: ಜಯಂತ ಕಾಯ್ಕಿಣಿ
ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು
ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ ಪ್ರಣಾಮ
ಅಪರೂಪ ರೂಪಸಿಯೆ ನಿನಗೆ ಪ್ರಣಾಮ
ತಂಗಾಳಿಯಂತೆ ಸುಳಿಸುಳಿಯುತ ಆವರಿಸಿಕೊಂಡಿರಲು ನೀನು
ಕುಡಿನೋಟದಲ್ಲೆ ನುಡಿ ನುಡಿಯುತ ನೇವರಿಸಿ ನಿಂದಿರಲು ನೀನು
ಮನಸೋತೆ ಮೋಹಿತನೆ ನಿನಗೆ ಪ್ರಣಾಮ
ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ
ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ
ಮೈಮರೆತು ಸಂತೆಯಲ್ಲು ನಿನ್ನನ್ನೆ ಕೂಗುವೆ
ಒರಗಿರಲು ನಿನ್ನ ಮಡಿಲಲಿ
ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ
ನೀನಿರಲು ನನ್ನ ಕಥೆಯಲಿ
ನಾನಿರುವೆ ನಿನ್ನ ಜೊತೆಯಲಿ
ಕಣ್ತುಂಬ ನಿನ್ನ ಅಂದ ಸವಿಯುತ್ತ ಕೂರಲೆ
ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೆ
ನೀನಿರಲು ನನ್ನ ತೋಳಲಿ
ನಾನೆಂದು ನೋಡದಂಥ ಬೆಳಕೊಂದು ಮೂಡಿದೆ
ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ
ಕಯ್ಯಿರಲು ನಿನ್ನ ಕಯ್ಯಲಿ
ನಾನಿರುವೆ ನಿನ್ನ ಬಾಳಲಿ..

No comments:

Post a Comment