Monday, December 27, 2010

ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ..


ಸಂಗೀತ: ಮನೋ ಮೂರ್ತಿ
ಗಾಯನ: ಕಾರ್ತಿಕ್, ಪ್ರಿಯ ಹಿಮೇಶ್
**** 

ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ
ಎದೆಗೆ ನಾಟಿದರೆ ಸೀದಾ ಸ್ವರ್ಗಕೆ ಸೋಪಾನ
ಹುಡುಗ ಅಲೆಮಾರಿ ಅವನ ಆಟ ಜೋಪಾನ
ನಮ್ಮ ಕಣ್ಣಲ್ಲೆ ಅವನ ಕನಸಿನ ನಿಲ್ಡಾಣ
ಕಣ್ಣೆದುರು ನೀವಿರಲು ಇನ್ನೆಲ್ಲಿ ನೋಡೋಣ
ಸ೦ತಸದ ಅಲೆಯಲ್ಲಿ ಜಾರದೆಯೆ ಕುಣಿಯೋಣ
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ ಅವನ ಆಟ ಜೋಪಾನ
ಕಣ್ಣಲೆ ದೀಪವ ಹಚ್ಚುವಿರಿ ಚಿನ್ನದ ಗರಿಗಳ ಚೆಲುವೆಯರೆ
ದೀಪಗಳ ಉತ್ಸವವೇ
ಬಣ್ಣದ ಬಲೆಯನು ಬೀಸುವಿರಿ ಮಿ೦ಚಿನ ಓಟದ ಮೋಹಿತರೆ
ಅಷ್ಟೊ೦ದು ಅವಸರವೇ
ಈ ಸಮಯ ಇನ್ನಿಲ್ಲ ಇನ್ನೇಕೆ ಬಿಗುಮಾನ
ಈ ಹರೆಯ ಬಲು ಜೋರು ಇರಬೇಕು ಕಡಿವಾಣ
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ ಅವನ ಆಟ ಜೋಪಾನ
ಮುತ್ತಿನ ಸರಗಳ ಖಜಾನೆಗೆ ನಿಮ್ಮಯ ಗುಡಿಲಲಿ ಕೀಲಿಯಿದೆ
ಒ೦ಚೂರು ತೆರೆಯುವಿರಾ
ನಮ್ಮಯ ಬಾಳಲಿ ಈಗೊ೦ದು ಗೆಳೆಯನ ಜಾಗ ಖಾಲಿಯಿದೆ
ಅರ್ಜಿಯನು ಬರೆಯುವಿರಾ
ಈ ಸೆಳೆತ ನಿನ್ನಿ೦ದ ನಾವೇನು ಮಾಡೋಣ
ಈ ಪಾಡು ನಿಮಗಿರಲಿ ಇನ್ನೊಮ್ಮೆ ಸೇರೋಣ
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ
ಎದೆಗೆ ನಾಟಿದರೆ ಸೀದಾ ಸ್ವರ್ಗಕೆ ಸೋಪಾನ
ಹುಡುಗ ಅಲೆಮಾರಿ ಅವನ ಆಟ ಜೋಪಾನ
ನಮ್ಮ ಕಣ್ಣಲ್ಲೆ ಅವನ ಕನಸಿನ ನಿಲ್ಡಾಣ
ಕಣ್ಣೆದುರು ನೀವಿರಲು ಇನ್ನೆಲ್ಲಿ ನೋಡೋಣ
ಸ೦ತಸದ ಅಲೆಯಲ್ಲಿ ಜಾರದೆಯೆ ಕುಣಿಯೋಣ
ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ ಅವನ ಆಟ ಜೋಪಾನ...

No comments:

Post a Comment