Monday, December 27, 2010

ಪುಟಗಳ ನಡುವಿನ ಗರಿಯೆ..

ಸಂಗೀತ: ಮನೋ ಮೂರ್ತಿ
ಗಾಯನ:ಪ್ರವೀಣ್ ದತ್ತ್ ಸ್ಟೀಫೆನ್
****
ಪುಟಗಳ ನಡುವಿನ ಗರಿಯೆ
ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ
ಮಳೆನೀರಿನಲ್ಲಿ ಓಡು
ಓ ಸ್ನೇಹವೆ ಹೂಹೂವಲಿ ನಗುವಾಗಿ ನೀನು ನೋಡು
ಆಕಾಶವೆ ಈ ಮಣ್ಣಲಿ ಮಗುವಾಗಿ ನೀನು ಆಡು
ಪುಟಗಳ ನಡುವಿನ ಗರಿಯೆ
ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ
ಮಳೆನೀರಿನಲ್ಲಿ ಓಡು
ಈ ಜೇಬಿನಲ್ಲಿ ಬುಗುರಿ ಬಳಪ ಕನಸು ನೂರು
ಓ ಆ ಮಾರಿನಲ್ಲಿ ಏಳು ಬಣ್ಣದ ಬಳೆಯ ಚೂರು
ಏನೇ ಇರಲಿ ಹ೦ಚಿ ನಲಿವ ಮುತ್ತು ಗೆಳೆತನ
ನಮ್ಮ ಗೆಳೆತನ ಇರಲಿ ಕಡೆತನ
ಪುಟಗಳ ನಡುವಿನ ಗರಿಯೆ
ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ
ಮಳೆನೀರಿನಲ್ಲಿ ಓಡು
ಈ ಕಾಲದಾರಿ ನೇರ ನಿನ್ನ ಮನದ ತನಕ
ಈ ಲೋಕವನ್ನು ಮೈಯ ಮರೆತು ತಿಳಿವ ತವಕ
ನಲುಮೆಗಿಲ್ಲಿ ಬರದೇ ಇರಲಿ ಎ೦ದೂ ಬಡತನಾ
ನಮ್ಮ ಗೆಳೆತನ ಇರಲಿ ಕಡೆತನ
ಪುಟಗಳ ನಡುವಿನ ಗರಿಯೆ
ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ
ಮಳೆನೀರಿನಲ್ಲಿ ಓಡು..

No comments:

Post a Comment