Monday, December 27, 2010

ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ..


ಚಿತ್ರ : ಕೃಷ್ನನ್ ಲವ್ ಸ್ಟೋರಿ
ಸಂಗೀತ : ವಿ. ಶ್ರೀಧರ್
ಗಾಯಕರು : ಸೋನು ನಿಗಮ, ವಿಧ್ಯಾಶ್ರೀ
*********************************

ಸಂತೆಯಲ್ಲೆ ನಿಂತರೂನು
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ನನ್ನ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ, ನಾನು ಮಾತ್ರ ಬಲ್ಲೆ ನಿನ್ನನ್ನೆ
ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡಿ ನಿನ್ನೆಯಾ ನೆನಪನೆ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ಜೀವಗಳ ಭಾಷೆ ಇದು ಬೇಕೆ ಅನುರಾಗ
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗು ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೊಡು
ನಿನ್ನಿಂದ ನನ್ನ ನೀನೆ ಕಾಪಡು
ಹೃದಯವೆ.....
ಸಂತೆಯಲ್ಲೆ ನಿಂತರೂನು
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ನನ್ನ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ, ನಾನು ಮಾತ್ರ ಬಲ್ಲೆ ನಿನ್ನನ್ನೆ
ಕಣ್ಣಿನಲೆ ದಾರಿ ಇದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ್ಯ ಹಿಡಿ ಇನ್ನು ಬಲವಾಗಿ
ನನ್ನೆಯ ತೋಳಲಿ ನೀನಿರೆ ಇಂದು
ಸಾವಿಗು ಹೇಳುವೆ ನಾಳೆ ಬಾ ಎಂದು
ಆಗಲೆ ಬೇಡ ದೂರ ಇನ್ನೆಂದು
ಹೃದಯವೆ.....
ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡಿ ನಿನ್ನೆಯಾ ನೆನಪನೆ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
ಸಂತೆಯಲ್ಲೆ ನಿಂತರೂನು.....

No comments:

Post a Comment