Monday, December 27, 2010

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..

ಸಂಗೀತ: ಮನೋ ಮೂರ್ತಿ
ಗಾಯನ: ರಾಜೇಶ್ ಕೃಷ್ಣನ್, ಶ್ರೇಯ ಗೋಶಲ್
**** 
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ
ಆಟದ ಬಯಲಿನ ಆಟವ ತೊರೆದು
ನೂತನ ಪುಟವನು ತೆರೆಯುವ ಸಮಯ
ಕಳಶದ ಕನ್ನಡಿ ಹೊಳೆಯುತಲಿರಲು
ಮಮತೆಯ ಧಾರೆಯ ಎರೆಯುವ ಸಮಯ
ಹಿರ್‍ಇಯರ ಹೃದಯವು ಹನಿಯುವ ಸಮಯ
ಹರೆಯದ ಕಣ್ಗಳು ಅರಳುವ ಸಮಯ
ಕಯ್ಯಲಿರಲು ಹೂಮಾಲೆ ಕಣ್ಣಿನಲ್ಲಿ ಪ್ರಾಣ
ತೆರೆಯೊಂದು ಸರಿದಾಗ ಸಂಜೀವನ
ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಮಳೆಬಿಸಿಲಿರಲಿ ಸಿಹಿ ಕಹಿ ಇರಲಿ
ಆಸರೆಯಾಗುವ ವಚನದ ಸಮಯ
ಮಂಗಳ ಸೂತ್ರದಿ ಬಾಳಿನ ಪಟವು
ಬಾನಿಗೆ ಏರುವ ಪಯಣದ ಸಮಯ
ನಲುಮೆಯ ದಿಬ್ಬಣ ನಲಿಯುವ ಸಮಯ
ನೆನಪಿನ ಬಾಗಿನ ನೀಡುವ ಸಮಯ
ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ
ಚೆಲುವಿನ ಔತಣದ ಸಮ್ಮಿಲನ
ಪಲ್ಲಕ್ಕಿಯಿಂದು ಹಾರುವ ಹಕ್ಕಿಯಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬನ್ನಿ ಕುಣಿಯೋಣ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ
ಬಲಗಾಲನಿಟ್ಟು ಬಾಳಿಂದು ಒಳಗೆ ಬಂದಿದೆ
ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ..

No comments:

Post a Comment