Monday, December 27, 2010

ಅರೆ ಅರೆ ಸಾಗುತಿದೆ..


 ಅರೆ ಅರೆ ಸಾಗುತಿದೆ
ಪ್ರೀತಿಯ ಗಾಳಿಗೆ ನಿನ್ನಯ ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೊ ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತ್ತಾರೆ
ಅಲೆ ಅಲೆ ಮೂಡುತಿದೆ
ಚಂದ್ರನ ಗಾಲಿಗೆ ಚಂದದ ತೀರಕೆ ಈ ಮನ ಓಡುತಿದೆ
ಪ್ರೀತಿಯಂದರೆ ಮರಳಿನ ಮೇಲೆ ಬೆರಳು ಗೀಚುವ ಚಿತ್ತಾರ
ಪ್ರೀತಿಯಂದರೆ ಕೆಲಸವಿಲ್ಲದ ಎರಡು ಹೃದಯಗಳ ಗ್ರಹಚಾರ
ಪ್ರೀತಿ ಹುಸಿಯಾ ಆಕಾಶ ಹೊನ್ನಕಿರಣಾ
ಪ್ರೀತಿ ಪ್ರಣಯ ಮಾತೆಲ್ಲ ಕಾಲಹರಣ
ಕೇವಲ ನೀನು ಮಾತಿನ ಮಲ್ಲ ಪ್ರೀತಿಯ ಮೌನ ಕಂಡವನಲ್ಲ
ಅರೆ ಅರೆ ಸಾಗುತಿದೆ
ಪ್ರೀತಿಯ ಗಾಳಿಗೆ ನಿನ್ನಯ ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೊ ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತ್ತಾರೆ
ಅಲೆ ಅಲೆ ಮೂಡುತಿದೆ
ಚಂದ್ರನ ಗಾಲಿಗೆ ಚಂದದ ತೀರಕೆ ಈ ಮನ ಓಡುತಿದೆ
ಪ್ರೀತಿ ಸೋಜಿಗಾ ಪ್ರೀತಿ ಸಂಭ್ರಮ ನವಿರು ನೆನಪಿನ ಕರೆಯೋಲೆ
ಪ್ರೀತಿ ವಂಚನೆ ಪ್ರೀತಿ ಚಂಚಲ ಕಣ್ಣ ಹನಿಗಳೆ ಜಪಮಾಲೆ
ಪ್ರೀತಿ ಹೂವು ಬಹುಮಾನ ಕಣ್ಣ ಬೆಳಕು
ಪ್ರೀತಿ ನೋವು ಅವಮಾನ ಹಳೆಯ ಸರಕು
ಕೇವಲ ನೀನು ಮಾತಿನ ಮಲ್ಲ ಪ್ರೀತಿಯ ಮೌನ ಕಂಡವನಲ್ಲ
ಅರೆ ಅರೆ ಸಾಗುತಿದೆ
ಪ್ರೀತಿಯ ಗಾಳಿಗೆ ನಿನ್ನಯ ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೊ ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತ್ತಾರೆ
ಅಲೆ ಅಲೆ ಮೂಡುತಿದೆ
ಚಂದ್ರನ ಗಾಲಿಗೆ ಚಂದದ ತೀರಕೆ ಈ ಮನ ಓಡುತಿದೆ..

No comments:

Post a Comment