Monday, December 27, 2010

ಅನಿಸುತಿದೆ ಯಾಕೋ ಇಂದು..ನೀನೇನೆ ನನ್ನವಳೆಂದು


ಸಂಗೀತ: ಮನೋ ಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಣಿ
ಹಾಡಿದವರು: ಸೋನು ನಿಗಮ್
*********




ಅನಿಸುತಿದೆ ಯಾಕೋ  ಇಂದು..ನೀನೇನೆ ನನ್ನವಳೆಂದು
ಮಾಯದ ಲೋಕದಿಂದ..ನನಗಾಗೆ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..
ಸುರಿಯುವ ಸೋನೆಯು ಸೂಸಿದೆ..ನಿನ್ನದೆ ಪರಿಮಳ
ಇನ್ನು ಯಾರ ಕನಸಲೂ..ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ  ಹಾಕಿದ ..ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೋ  ಇಂದು..
ತುಟಿಗಳ ಹೂವಲಿ..ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ..ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ..ಹೃದಯದಿ ನಾನೇ  ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೋ  ಇಂದು..ನೀನೇನೆ ನನ್ನವಳೆಂದು
ಮಾಯದ ಲೋಕದಿಂದ..ನನಗಾಗೆ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..

No comments:

Post a Comment