Wednesday, December 29, 2010

ಜೀವ ಹೋದ ಬಳ್ಳಿಗೆ ನೀರೇಕೆ? ಲೂಟಿಯಾದ ಕೋಟೆಗೆ ಕಾವಲೇಕೆ?

 
ಚಿತ್ರ : ಮೈಲಾರಿ
ಸಂಗೀತ : ಗುರುಕಿರಣ್
ಕಂಠದಾನ : ಕೈಲಾಶ್ ಖೇರ್
****

ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದಾ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..

ಕನಸನು ಕೊಂದಾಯಿತು
ಮಸಣಕೆ ತಂದಾಯಿತು
ಹೂಳುವಾ ವೇಳೆ ಅಳು ಯಾಕಿನ್ನು?
ಹಕ್ಕಿಯು ಹಾರೋಯಿತು
ಗೂಡಿದು ಹಾಳಾಯಿತು..
ಯಾರದೋ ಕಣ್ಣಾ ಬಲಿ ನಾವೇನು. ...
ಸಾವಿರ ಶೂಲಾ ಚುಚ್ಚೋ
ಗಾಯಕೂ ತುಂಬಾ ಹೆಚ್ಚು
ಪ್ರೀತಿಯಿಂದಾನೇ ಆಗೋ ಈ ನೋವು ..

ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??

ಅರಳಿದಾ ಕೆಂದಾವರೆ .
ದೇವರಿಗೆ ಎಂದಾದರೆ ..
ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ ...
ಭೂಮಿಯೇ ಹೋಳಾದರೆ
ಬಾನದು ಚೂರಾದರೆ
ಬಾಳುವಾ ಮಾತು ಅದು ಸಾಧ್ಯಾನಾ..
ಪ್ರೀತಿಗೆ ಸೋಲೇ ಇಲ್ಲ ..
ಎನ್ನುವ ದೊಡ್ಡಾ  ಸುಳ್ಳ ..
ನಂಬಲೇ ಬೇಡ ಇನ್ನು ನೀನೆಂದು ...

ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..

Tuesday, December 28, 2010

ಉಪ್ಪಿನಕಾಯಿ ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..


Miss, miss is the word which is mysterious, mischievous miscellaneous, miscalculas. If you missuse the word miss, everything will misfire, misplace, mistake, mismatch and goes on. The history becomes mystery, the story becomes misery.

Understand.


Miss understand.


ಕಾಯಿ
ಕಾಯಿ ಕಾಯಿ.. ಕಾಯಿ ಕಾಯಿ ಕಾಯಿ..
ಕಾಯಿ
ಕಾಯಿ ಕಾಯಿ... ಕಾಯಿ ಕಾಯಿ ಕಾಯಿ..

ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..
ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..

ಟೇಕ್
ಗೆ ಮಿಸ್ ಸೇರಿ ಮಿಸ್ಟೇಕ್
ಯೂಸ್
ಗೆ ಮಿಸ್ ಸೇರಿ ಮಿಸ್ಯೂಸ್
ಗೈಡ್
ಗೆ ಮಿಸ್ ಸೇರಿ ಮಿಸ್ಗೈಡ್
ಫೈರ್
ಗೆ ಮಿಸ್ ಸೇರಿ ಮಿಸ್ಫೈರ್

ಮಿಸ್ಸಮ್ಮಾ
ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್
ಮಿಸ್ಸಮ್ಮಾ
ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್

ಮಿಸ್
ಅಂಡರ್ಸ್ಟ್ಯಾಂಡ್..

ಮಿಸ್
ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..
ಮಿಸ್
ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..

ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..
ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..

ಟೇಕ್
ಗೆ ಮಿಸ್ ಸೇರಿ ಮಿಸ್ಟೇಕ್
ಯೂಸ್
ಗೆ ಮಿಸ್ ಸೇರಿ ಮಿಸ್ಯೂಸ್
ಗೈಡ್
ಗೆ ಮಿಸ್ ಸೇರಿ ಮಿಸ್ಗೈಡ್
ಫೈರ್
ಗೆ ಮಿಸ್ ಸೇರಿ ಮಿಸ್ಫೈರ್

ಐಪಿಎಲ್
ಜಮಾನಾ, -ಪಿಲ್, ಬೆಟ್ಟಿಂಗಿನ, ಲವ್ ಫಿಕ್ಸಿಂಗಮ್ಮಾ
ಡೋಂಟ್
ಟೇಕ್ ಇಟ್ ಸೀರಿಯಸ್
ವೀಕೆಂಡಿನ
ಲವ್ ಸ್ಟೋರಿನ ನೋ ಮಿಕ್ಸಿಂಗಮ್ಮಾ
ಆನ್
ಲೈನಿನಲ್ಲೆ ಈಗ ಲೈನು
ಯೂಟ್ಯೂಬ್
ನಲ್ಲೆ ಎಲ್ಲ ಜೇನು
ಯಂಗ್
ಸ್ಟಾರ್ ಸುಪ್ರಭಾತ ಶೋಕ
ಅದುವೆ
ಲವ್ ಸೆಕ್ಸ್ ದೋಖಾ

ಮಿಸ್ಸಮ್ಮಾ
ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್
ಮಿಸ್ಸಮ್ಮಾ
ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್

ಮಿಸ್
ಅಂಡರ್ಸ್ಟ್ಯಾಂಡ್..

ಮಿಸ್
ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..
ಮಿಸ್
ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..

ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..
ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..

ಟೇಕ್
ಗೆ ಮಿಸ್ ಸೇರಿ ಮಿಸ್ಟೇಕ್
ಯೂಸ್
ಗೆ ಮಿಸ್ ಸೇರಿ ಮಿಸ್ಯೂಸ್
ಗೈಡ್
ಗೆ ಮಿಸ್ ಸೇರಿ ಮಿಸ್ಗೈಡ್
ಫೈರ್
ಗೆ ಮಿಸ್ ಸೇರಿ ಮಿಸ್ಫೈರ್

ಬೇಕು
ಭಾವೈಕ್ಯತೆ ಆರ್ಥಿಕತೆ ಅಕ್ಕನ ಜತೆ ಭಾವನ ಐಐಕ್ಯತೆ
ಹೈ
ಹೈ ಹೈ ಯುವಕರು ಯುವಕರು ಯುವಕರು ಬರಿ ಹಾಯೋ ಕರು
ಒಂದೇ
ಒಂದು ಮಿಸ್ಡ್ ಕಾಲ್, ಆಚೆ ಇಟ್ಲು ಮಿಸ್ಸು ಕಾಲು
ಒಂದೇ
ಒಂದು ಎಸ್ಸೆಮ್ಮೆಸ್ಸು, ಮಿಸ್ಸಿನ ಮನಸ್ಸು ಆಯ್ತು ಮೆಸ್ಸು

ಮಿಸ್ಸಮ್ಮಾ
ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್
ಮಿಸ್ಸಮ್ಮಾ
ಮಿಸ್ಸಮ್ಮಾ ಮಿಸ್ ಮಿಸ್ಯೂಸಾದರೆ ಡಿಸ್ಮಿಸ್ ಮಿಸ್

ಮಿಸ್
ಅಂಡರ್ಸ್ಟ್ಯಾಂಡ್..

ಮಿಸ್
ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..
ಮಿಸ್
ಅಂಡರ್ಸ್ಟ್ಯಾಂಡ್.. ಮಿಸ್ ಅಂಡರ್ಸ್ಟ್ಯಾಂಡ್..

ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..
ಉಪ್ಪಿನಕಾಯಿ
ಕಾಯಿ ಕಾಯಿ.. ಉಪ್ಪಿನಕಾಯಿ ಕಾಯಿ ಕಾಯಿ..

ಟೇಕ್
ಗೆ ಮಿಸ್ ಸೇರಿ ಮಿಸ್ಟೇಕ್
ಯೂಸ್
ಗೆ ಮಿಸ್ ಸೇರಿ ಮಿಸ್ಯೂಸ್
ಗೈಡ್
ಗೆ ಮಿಸ್ ಸೇರಿ ಮಿಸ್ಗೈಡ್
ಫೈರ್
ಗೆ ಮಿಸ್ ಸೇರಿ ಮಿಸ್ಫೈರ್...!!!

ನೀ ಸನಿಹಕೆ ಬಂದರೆ ಹೃದಯದ ಗತಿ ಏನು ಹೇಳು ನೀನು ….ನೀನೆ ಹೇಳು..

 ಚಿತ್ರ : ಮಳೆಯಲಿ ಜೊತೆಯಲಿ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ಸಂಗೀತ : ವಿ. ಹರಿಕೃಷ್ಣ
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ….ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರೂ  ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು …ಹೇಳು ನೀನು..
ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
  ನಿನ್ನಾ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಘಳಿಗೆ,
ನಿನ್ನಾ  ಮಾತು ಏನೆ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ….ನೀನೆ ಹೇಳು
ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನಾ ನೆನಪು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿ ಕೊಳ್ಳೋ ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ …ಉಳಿಸು ನನ್ನನು
ದಾರಿಯಲ್ಲಿ ಬುದ್ಧಿ  ಹಿಡಿದು ನಿಂತ ಸಾಥಿ ನೀನೆ ಏನು 
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ….ನೀನೆ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು …ಹೇಳು ನೀನು..

ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ..


ಚಿತ್ರ: ಪರಿಚಯ
ಗಾಯಕರು: ಶ್ರೇಯಾ ಘೋಶಾಲ್ ಮತ್ತು ಶಾನ್
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಜೆಸ್ಸಿ ಗಿಫ್ಟ್
******
ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ
ಹುಡುಕಾಟವೇ ರೋಮಾಂಚಕ
ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ
ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ ತುಸು ದೂರ ಚಲಿಸಿದೆ ಎಲ್ಲ
ಮನವೀಗ ಮರೆಯುತ ಮೈಯ ಗುರುತನ್ನೇ ಅರಸಿದೆ ಎಲ್ಲ
ನಿನ್ನಾ ಕಂಡಾಗಲೇ ಜೀವವು
ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ
ಅನುರಾಗಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು ನವಿರಾದ ಪರಿಮಳವೇನು
ನೀನೇ ಈ ಜೀವದ ಭಾವವು
ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ
ಹುಡುಕಾಟವೇ ರೋಮಾಂಚಕ..

ಆಕಾಶ ನೀನೇ ನೀಡೊಂದು ಗೂಡು

 ಚಿತ್ರ : ಅಂಬಾರಿ
ಆಕಾಶ ನೀನೇ ನೀಡೊಂದು ಗೂಡು
ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೇ ನೀಡೊಂದು ಹಾಡು
ಕಂಡಿತು ಕಾಲುದಾರಿ
ಒಂದಾದ ಜೀವ ಹೂವಾಗುವಂತೆ
ಎಂದೂ ಕಾಪಡಲಿ
ಪ್ರೀತಿಯ ಅಂಬಾರಿ
ಕಣ್ಣಿನಲ್ಲಿ ಕಣ್ಣಿರೆ
ಲೋಕವೆಲ್ಲ ಹೂ ಹಂದರ
ಭಾವ ಒಂದೇ ಆಗಿರೆ
ಬೇಕೆ ಬೇರೆ ಭಾಷಾಂತರ
ಎದೆಯಿಂದ ಹೊರ ಹೋಗೊ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ
ಪ್ರೀತಿಯ ಅಂಬಾರಿ
ಕಾಣದಂಥ ಹೊಸ್ತಿಲು
ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ
ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ
ಪ್ರೀತಿಯ ಅಂಬಾರಿ..

ಈ ಸಂಜೆ ಯಾಕಾಗಿದೆ ನೀನಿಲ್ಲದೇ..

ಚಿತ್ರ : ಗೆಳೆಯ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ಸಂಗೀತ : ಮನೋ ಮೂರ್ತಿ
********
 ಈ ಸಂಜೆ ಯಾಕಾಗಿದೆ ನೀನಿಲ್ಲದೇಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೇ
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ
ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವೂ ಹೂವಾಗಿದೆ
ಮೈಯಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ
ನೀನಿಲ್ಲದೆ ಆ ಚಂದಿರ
ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ..

ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು..


ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಹನಿ ಹನಿಯಾ ಇನಿ ದನಿಗೆ
ನಾ ವಿವರಿಸಿಣೆ ನೀಡಲಾ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಅದೆ ಅದೆ ಮೋಡವಿಗಾ
ವಿನೂತನ ರೂಪ ತಾಳಿ
ನಿನ್ನಾ ಸೋಕಿದೆ
ಪದೆ ಪದೆ ಗಂಧ ಗಾಳಿ
ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನಾ ಕುಡಿಯನು ಮನಸಲೆ ಬಿಡಿಸಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಇದೇನಿದು ಮೂಕ ಭಾವ
ತಯಾರಿಯೆ ಇಲ್ಲದೇನೆ ನನ್ನಾ ಕಾಡಿದೆ
ನಿವೇದನೆ ಆದ ಮೇಲು ಸತಾಯಿಸ ಬೇಕು ನೀನು
ನನ್ನಾ ನೋಡದೆ
ಸಿಡಿಲಿನಾ ಇರುಳಲು
ಪಿಸುನುಡಿ ಕೇಳಲು
ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ
ಹನಿ ಹನಿಯಾ ಇನಿ ದನಿಗೆ
ನಾ ವಿವರಿಸಿಣೆ ನೀಡಲಾ
ಮಳೆಯಲಿ ಜೊತೆಯಲಿ
ದಿನವಿಡಿ ನೆನೆಯಲು
ನನಗೆ ಕುತೂಹಲ
ಒ ತುಂಬಾ ಕುತೂಹಲ..

ಏನು ಹೇಳಬೇಕು ಅಂದೆ ಏನದು?


ಚಿತ್ರ : ಮಳೆಯಲಿ ಜೊತೆಯಲಿ
ವರ್ಷ : 2009
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ವಿ. ಹರಿಕೃಷ್ಣ
ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್
*****
ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಯಿತು ಇನ್ನು ಕಾದು
ಮನಸಿನ ಪರಿಚಯ, ಕನಸಿನ ವಿನಿಮಯ‌
ಮೆಲ್ಲಗೆ ನಡೆದಿದೆ, ಕಾಣಲಾರೆಯ...
ನಾ ನೋಡು ಹೇಗಾದೆ, ನೀ ಬಂದ ತರುವಾಯ‌
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ‌
ಹೆಚ್ಚು ಕಡಿಮೆ ನಾನೀಗ, ಹುಚ್ಚನಾಗಿ ಹೋದಂತೆ
ಹಚ್ಚಿಕೊಂಡ ಮೇಲೆ ನಿನ್ನ
ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು
ಇಷ್ಟಬಂದ ಹಾಗೆ ನನ್ನ
ಓ.... ಈಗ ಮೂಡಿದ ಪ್ರೇಮಗೀತೆಗೆ
ನೀನೆ ಸುಂದರ ಶೀರ್ಷಿಕೆ ಆದೆಯ‌
ನನ್ನೆಲ್ಲ ಭಾವಗಳು ನಿನಗೆಂದೆ ಉಳಿತಾಯ‌
ಅದ ನೀನೆ ದೋಚಿದರೆ, ನಾನಂತು ನಿರುಪಾಯ || ಏನು ಹೇಳಬೇಕು ||
ಅಂದಹಾಗೆ ಹೀಗೆಲ್ಲಾ ಎಂದು ಕೂಡ ನನ್ನಲ್ಲಿ
ಅಂದುಕೊಂಡೆ ಇಲ್ಲ ನಾನು...
ಸನ್ನೆಯಲ್ಲೆ ಏನೇನೋ ಅನ್ನುವಾಗ ನೀನೆ
ಇನ್ನು ಇಲ್ಲ ಬಾಕಿ ಏನು...
ನಿನ್ನ ಕಣ್ಣಿನ ಮಿಂಚೆ ಕಲಿಸಿದೆ
ಸೀದ ಜೀವಕೆ ನಾಟುವ ಭಾಷೆಯ..
ದಿನರಾತ್ರಿ ನನಗೀಗ ಕನಸಲ್ಲೆ ವ್ಯವಸಾಯ‌
ದಿನಗೂಲಿ ನೀಡುವೆಯ, ನಾನಂತು ನಿರುಪಾಯ... || ಏನು ಹೇಳಬೇಕು ||
ಮಾತನಾಡಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ‌
ಮಾತಾಡಲಿ ನನ್ನ ಮೌನ...
ಮನಸಿನ ಪರಿಚಯ, ಕನಸಿನ ವಿನಿಮಯ‌
ಮೆಲ್ಲಗೆ ನಡೆದಿದೆ, ಕಾಣಲಾರೆಯ...
ನಾ ನೋಡು ಹೇಗಾದೆ, ನೀ ಬಂದ ತರುವಾಯ‌
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ‌..

ಮಾಯವಾಗಿದೆ ಮನಸು ಹಾಗೆ ಸುಮ್ಮನೆ..


ಬರೆದವರು : ಜಯಂತ್ ಕಾಯ್ಕಿಣಿ
ಹಾಡಿರುವವರು : ಸೋನು ನಿಗಮ್
ಸಂಗೀತ : ಮನೋ ಮೂರ್ತಿ
*****
ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮದುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ
ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲು ಅವಳದೇ ವೈಖರಿ
ಅವಳ ನಿಲುವು ಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ
ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ
ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾರಿದಾಗಲೇ ಜೀವದ ಮಾಹಿತಿ
ಎಲ್ಲೇ ಹೊರಟು ನಿಂತರು ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ
ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮದುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ.........

ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...


ಚಿತ್ರ: ಉಲ್ಲಾಸ ಉತ್ಸಾಹ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಜಿವಿ ಪ್ರಕಾಶ್ ಕುಮಾರ್
ಗಾಯಕ: ಸೋನು ನಿಗಮ್
******
ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...
ನಾ ಹೇಳಲೇ ಬೇಕು ಎಂದ ವಿಷಯವೇ ಮರತೇ ಹೋಯ್ತಲ್ಲ ನಿನ್ಮುಂದೇ...
ಚೆಲುವೇ...
ನಾ ತೋರಿಸಲೆಂದೇ ತಂದ ಹೃದಯವೇ ಹೊರಟೇ ಹೋಯ್ತಲ್ಲ ನಿನ್ನ ಹಿಂದೆ...
ಚೆಲುವೇ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಹೊ...
ಚಲಿಸುವಾ ಚೆಲುವೇ... ಒಲಿಸಲೂ ಬರುವೇ...
ನೂರು ನೂರು ಬಯಕೆಗಳ
ಪಾಠಶಾಲೆ ತೆರೆಯುವೆನು
ತಿಳಿಸುತಲೇ... ಕಲಿಯುವೇನೂ...
ಹೋ...
ಜೋಡಿಯಾಗಿ ಹೆಸರುಗಳಾ
ಗೀಚಿ ನೋಡಿ ಅಳಿಸುವೆನು
ಸನಿಹದಲೇ ಸುಳಿಯುವೆನು
ಯಾರೂ ನಮ್ಮ ಕಾಣದಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓ ಓ ಓ..
ಚಲಿಸುವಾ ಚೆಲುವೇ... ಒಲಿಸಲೂ ಬರುವೇ...
ಕಾದು ಕೂತ ಕನಸುಗಳಾ
ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳೂ
ಜೀವ ವೇಗ ಗರಿಗೆದರಿ
ಮೂಕ ಹಾಗೆ ಚಿಗುರುತಿದೆ
ಉಸಿರುಗಳೂ ಬೆರೆತಿರಲೂ
ಹೊ...
ಕಣ್ಣಲ್ಲೇ ರೂಪರೇಖೆ ಹಾಕೋಣ
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣಾ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ... ನಿಜವಾದಂತೆ ಕನಸಾಗಿದೆ...ಓ ಓ ಓ...
ಚಲಿಸುವಾ ಚೆಲುವೇ...

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,

ಚಿತ್ರ : ಮನಸಾರೆ
 ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಕೂತಿವೆ ಏನು ಮಾತಾಡದೆ...
ಮರೆಯದ ನೋವಿಗೆ ಮೆಲ್ಲಗೆ, ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ.
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ, ಒಲವಿನ ಕಲ್ಪನೆ ತ೦ಪನು ಬೀರದೆ...
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ.
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಕೂತಿವೆ ಏನು ಮಾತಾಡದೆ...
ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆವರೆಗೂ...
ಉಳಿಯಲಿ ಹೇಗೆನಾ?
ಮನದ ನೀವೇದನೆ ಮೌನವೇ ಕೇಳುನೀ.....
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ...
ನಿನ್ನ ದನಿ ಕೇಳಿದೆ....ನನ್ನ ನಗು ಕಾಡಿದೆ...
ಸಣ್ಣ ದನಿಯೊ೦ದಿಗೆ...ನನ್ನ ಮನ ಕೂಗಿದೆ...
ನಿನ್ನಯ ಮೌನವೂ....ನನ್ನೆದೆ ಗೀರಲೂ...
ಕನಸುಗಳ ಗಾಯದಿ ಹೃದಯ ಹೋಳಾಗಿದೆ..
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಸೋತಿವೆ ಏನು ಮಾತಾಡದೆ...
ಮರೆಯದ ನೋವಿಗೆ ಮೆಲ್ಲಗೆ, ಮೆಲ್ಲಗೆ....
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ.
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ....

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ??


ಒಂದೇ ನಿನ್ನ ನೋಟ ಸಾಕು
ಗಾಯಕ: ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ
*****
ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೆ
ಹೇಳು ಏನು ನೀಡಬೇಕು ಮಾತನಾಡೋಕೆ..
ಕಾಣದ ಒಂದು ಕಾಮನಬಿಲ್ಲು ಮೂಡಿದೆ ನನ್ನೆದುರಲ್ಲೂ...
ಹೂವಿನ ಬಾಣ ನಾಟಿದೆ ಏನು.. ಲೂಟಿಯಾಗಿ ಹೋದೆನಾನು
ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ....
ಎಲ್ಲೇ ನೋಡಿದಲ್ಲೂ ನೀನೆ ಅಡಗಿ ಕೂತಂತೆ
ಹರಿದ ನೋಟಿನಂತೆ ನಾನೇ ತಿರುಗಿ ಬಂದಂತೆ
ಬಾರೆ ಬಿಡಿಸೋಣ... ಕನಸುಗಳ ಕಂತೆ
ನನ್ನ ತುಂಬಾ ನೀನೆ ತಾಜಾ ಸುದ್ದಿಯಾದಂತೆ..
ನಿನ್ನ ಮುಂದೆ ಚಂದ್ರ ಕೂಡ ರದ್ದಿಯಾದಂತೆ..
ಸುಂದರವಾದ ಸುಂಟರಗಾಳಿ ನಿನ್ನಯ ರೂಪವ ತಾಳಿ
ಮಿಂಚಿನ ದಾಳಿ ಮಾಡಿದೆ ಏನು, ಲೂಟಿಯಾಗಿ ಹೋದೆನಾನು...
ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ....
ನೀನು ಕೇಳಲೆಂದೇ ಕಾದ ಒಂದು ಪದವಾಗಿ,
ನಿನ್ನ ಕಾಸ ಕೋಣೆಯಲ್ಲಿ ಸಣ್ಣ ಕದವಾಗಿ,
ಇರಬೇಕು ನಾನು.. ನಿನ್ನ ಜೊತೆಯಾಗಿ
ಓದಲೆಂದೇ ನೀನು ಮಡಿಸಿ ಇಟ್ಟ ಪುಟವಾಗಿ
ಇನ್ನು ಚಂದಗೊಳಿಸುವಂತ ನಿನ್ನ ಹಠವಾಗಿ
ಕಣ್ಣಲಿ ಕಸವ ಬೀಳಿಸಿಕೊಂಡು ಊದಲೂ ಕರೆದರೆ ನಿನ್ನ
ನಿನ್ನದೇ ಬಿಂಬವು ನೋಡಲು ನೀನು, ಲೂಟಿಯಾಗಿ ಹೋದೆನಾನು...
ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೆ
ಹೇಳು ಏನು ನೀಡಬೇಕು ಮಾತನಾಡೋಕೆ...??

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ.......


ಚಿತ್ರ: ಮನಸಾರೆ..
ಸಾಹಿತ್ಯ: ಜಯಂತ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಹಾಡಿದವರು: ಸೋನು ನಿಗಮ್
*****
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ವ್ಯಾಮೋಹವ ಕೇವಲ ಮಾತಿನಲಿ... ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲೀ... ಬೀಳದೆ ಇರಬಹುದೆ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಕಣ್ಣಲಿ ಮೂಡಿದೆ ಹನಿಗವನ... ಕಾಯಿಸಿ ನೀ ಕಾಡಿದರೆ...
ನೂತನ ಭಾವದ ಆಗಮನ... ನೀ ಬಿಡದೇ... ನೋಡಿದರೇ...
ನಿನ್ನ ಧ್ಯಾನದಿ ನಿನ್ನದೆ ತೋಳಿನಲಿ ಹೀಗೆಯೇ ಇರಬಹುದೇ?
ಈ ಧ್ಯಾನವ ಕಂಡರೆ ದೇವರಿಗೂ ಕೋಪವು  ಬರಬಹುದೇ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ನೆನಪಿನ ಹೂಗಳ ಬೀಸಣಿಕೆ ನೀ ಬರುವ ದಾರಿಯಲಿ...
ಓಡಿದೆ ದೂರಕೆ ಬೀಸಲಿಕೆ ನೀನಿರುವ ಊರಿನಲಿ...
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ?
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ವ್ಯಾಮೋಹವ ಕೇವಲ ಮಾತಿನಲಿ... ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲೀ... ಬೀಳದೆ ಇರಬಹುದೆ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ.....


ಚಿತ್ರ: ಲವ್ ಗುರು
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಜಾಶುವ ಶ್ರೀಧರ್
ಹಾಡಿದವರು:ಕಾರ್ತಿಕ್ ಮತ್ತು ಬೆನ್ನಿ
*****
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ನೂರೆಂಟು ರೀತಿಯ ನೆನಪಿನ ಬಳ್ಳಿ ಮೆಲ್ಲಗೆ ಮೂಡಿದೆ ಎದೆಯಲ್ಲಿ..
ಎಂದೆಂದು ಬಾಡದ ಕನಸಿನ ಹೂವು ನಿನ್ನ ಧ್ಯಾನದಲಿ ಅರಳೀ..
ಕಣ್ಣಲೇ ಮಾತಾಡುತಾ ಸರಿಯಾಗಿ ಹೇಳು ಇದು ಎನು ಅಂತಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ನಿಂತಲ್ಲಿ ಕೂತಲ್ಲಿ ಸಂತಸದಂತ ಸುಂದರ ಮೋಹಕೆ ಮರುಳಾದೆ...
ಬೇರೇನು ಬೇಕಿಲ್ಲ ನಿನ್ನನು ಕಂಡು ಎಲ್ಲಾ ತಾರೆಗಳಾ ತೊರೆದೇ...
ಮಾತನು ಮರೆಮಾಚುತಾ ಸವಿಯಾದ ಭಾವ ನಿನಗೂನು ಬಂತಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...

ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..


ಕುಡಿನೋಟವೇ ಮನಮೋಹಕ - ಪರಿಚಯ
ಗಾಯಕರು : ಶಾನ್, ಶ್ರೇಯ ಗೋಶಲ್
ಸಾಹಿತ್ಯ : ಜಯಂತ್ ಕಾಯ್ಕಿಣಿ
****
ಹೆಣ್ಣು : ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..
ಗಂಡು : ಹುಡುಕಾಟವೇ.. ರೋಮಾಂಚಕ.. ಕುಡಿನೋಟವೇ.. ಮನಮೋಹಕ.. ಒಡನಾಟವೇ..
ಹೆಣ್ಣು : ಬಲು ರೋಚಕ..
ಹೆಣ್ಣು : ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ..
ಗಂಡು : ಬೆರಳೆಲ್ಲ ಓಲೆ ಗೀಚಿ.. ಮಸಿಯಾಗಿದೆ.. ಮಸಿಯಾಗಿದೆ..
ಹೆಣ್ಣು : ಕನಸ್ಸೊಂದು ಕುಲುಕುತ ಕೈಯಾ.. ತುಸು ದೂರ ಚಲಿಸಿದೆಯಲ್ಲ..!
ಗಂಡು : ಮನವೀಗ ಮರೆಯುತ ಮೈಯ್ಯ. ಗುರುತನ್ನೇ ಅರಸಿದೆಯೆಲ್ಲ..
ಹೆಣ್ಣು : ನಿನ್ನ ಕಂಡಾಗಲೇ ಜೀವಲೋಕ ..!!
ಗಂಡು : ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..
ಹೆಣ್ಣು : ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ..
ಗಂಡು : ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ..
ಹೆಣ್ಣು : ಮರೆಮಾಚಿ ಕರೆಯಲು ನೀನು.. ಮನಸಾರೆ ಪರವಾಶ ನಾನು..
ಗಂಡು : ನೆನಪಾಗಿ ಸುಳಿಯಲು ನೀನು.. ನವಿರಾದ ಪರಿಮಳ ವೇನು..?
ಹೆಣ್ಣು : ನೀನೆ... ಈ ಜೀವದ ಭಾವಲೋಕ..
ಗಂಡು : ಕುಡಿನೋಟವೇ.. ಮನಮೋಹಕ..
ಹೆಣ್ಣು : ಒಡನಾಟವೇ.. ಬಲು ರೋಚಕ..
ಹೆಣ್ಣು : ಹುಡುಕಾಟವೇ..
ಗಂಡು : ರೋಮಾಂಚಕ..

ಮಳೆ ಬರುವ ಹಾಗಿದೆ... ಮನವೀಗ ಹಾಡಿದೆ...


ಮಳೆ ಬರುವ ಹಾಗಿದೆ...
ಮನವೀಗ  ಹಾಡಿದೆ...
ಮಳೆ ಬರುವ ಹಾಗಿದೆ
ಮನವಿಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ...
ನಿನ್ನ.. ನಗುವಿನಲ್ಲಿ ನನ್ನ ನಸುಕು
ನಿನ್ನ .. ರೂಪ ಧರಿಸಿ ಬಂದು ನಡಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ ...
ಎದೆಯ ಬಾಗಿಲಲ್ಲಿ ನಿನ್ನ ಸುಳಿವು
ಸಣ್ಣ ಆಸೆಯಲ್ಲಿ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ
ಮಳೆ ಬರುವ ಹಾಗಿದೆ
ಮನವಿಗ ಹಾಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ .....

ಮಧುರ ಪಿಸುಮಾತಿಗೆ...... ಅದರ ತುಸು ಪ್ರೀತಿಗೆ......


ಚಲನ ಚಿತ್ರ : ಬಿರುಗಾಳಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಮಧುರ ಪಿಸುಮಾತಿಗೆ...... ಅದರ ತುಸು ಪ್ರೀತಿಗೆ......
ಇರುವಲ್ಲಿಯೇ ಇರಲಾರದೆ.. ಬರುವಲ್ಲಿಯು ಬರಲಾರದೆ..
ಸೋತೆ ನಾನು ನಿನ್ನ ಪ್ರೀತಿಗೆ... ಓ... ಓ... ಚೂರಾದೆ ಒಂದೇ ಬೇಟಿಗೆ...
ಮಧುರ ಪಿಸುಮಾತಿಗೆ...... ಅದರ ತುಸು ಪ್ರೀತಿಗೆ......
ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ..
ದಾರಿಯನೇ ಬರಿ ನೋಡುವೆನು ನೀ ಕಾಣುವವರೆಗೆ..
ನಿನ್ನದೇ ಪರಿಮಳ, ನಿನ್ನಯ ನೆನಪಿಗೆ, ಏನಿದು ಕಾತರ,
ಬಾರಿ ಬಾರಿ ನಿನ್ನ ಬೇಟಿಗೆ.. ಓ.. ಓ.... ಸೋತೆ ನಾನು ನಿನ್ನ ಪ್ರೀತಿಗೆ.. ||ಮಧುರ||
ನೋಡಿದರೆ ಮಿತಿ ಮೀರುತಿದೆ ಮನ ಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ, ಕನಸಿನ ಊರಿಗೆ, ಕುಣಿಯುತ ಬಂದೆನು,
ಭಿನ್ನವಾದ ನಿನ್ನ ದಾರಿಗೆ.. ಓ.. ಓ.... ಸೋತೆ ನಾನು ನಿನ್ನ ಪ್ರೀತಿಗೆ.. ||ಮಧುರ||

ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು


ಸಾಹಿತ್ಯ:ಜಯಂತ್ ಕಾಯ್ಕಣಿ
ಸಂಗೀತ:ಮನೋಮೂರ್ತಿ
ಗಾಯಕರು: ಸೋನು ನಿಗಮ್
****
ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು.
ಅಂತ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಕಣ್ಣಲಿದೆ ಆ ಕಣ್ಣಲಿದೆ ಹೊಂಬೆಳಕಿನ ನವ ನೀಲಾಂಜನ
ಇನ್ನೇಲ್ಲಿದೆ ಆಹ ಇನ್ನೇಲ್ಲಿದೆ ಹೂ ಮನಸಿನ ಆ ಮಧು ಗುಂಜನ
ಬೇರೆಯೇನು ಕಾಣಲಾರೆ ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ನಗೆಯಲ್ಲಿದೆ ಆ ಬಗೆಯಲ್ಲಿದೆ ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ ತಲೆ ಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚೆಂದವಾಗಿ ಅಳಿಸದಂತ ಗಂಧವಾಗಿ
ಮೊದಲ ಬಾರಿ ಕಂಡ ಕ್ಷೆಣವೇ ಬಂಧಿಯಾದೆನು
ಹೋದೆ ನಾನು ಕೆಳೆದು ದಯಮಾಡಿ ಪತ್ತೆ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ
||ಮಾತಿನಲ್ಲಿ ಹೇಳಲಾರೆನು||

ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ..


ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ತಾನಾಗಿಯೆ ಮನ ಹಾರಾಡಿದೆ
ನಿ ಕೇಳು ಒಲವಿನ ಇಂಚರ
ಪ್ರೀತಿಯಲ್ಲಿ ಸೋತು ನೋಡು
ಪ್ರೀತಿಯಲ್ಲಿ ಮಾತೆ ಹಾಡು
ಪ್ರೀತಿಯಲ್ಲಿ ಜಗವೆಲ್ಲ ಜಗಮಗ ಸುಂದರ
ಪ್ರೀತಿಇದು ಸುಳ್ಳೆ ಶೋಕಿ
ಪ್ರೀತಿಯಲ್ಲಿ ನೋವೆ ಬಾಕಿ
ಪ್ರೀತಿ ಇದು ಹಿತವಾಗಿ ಸೆಲೆಯುವ ಪಂಜರಾ
ಪಿಸುನೋಟದಿಂದಲೆ ಓಲೆ ಬರೆವ
ಅಲೆ ಮಾರಿ ಸಂತೋಷ ಈ ಪ್ರೀತಿಗೆ
ಮರುಳಾಗಿ ಹಿಂದೇನೆ ಓಡಿಬರುವ
ಹಟಮಾರಿ ಆವೇಶ ಈ ಪ್ರೀತಿಗೆ
ಈ ಕಾಯುವ ಖುಷಿ ಬೇರೆಇದೆ
ಮನಸೀಗ ಕನಸಿನ ಆಗರ
ಹೇ ಪ್ರೀತಿ ಬರಿ ಆಪಾದನೆ
ಗಾಯಗಳ ಸಂಪಾದನೆ
ಪ್ರೀತಿ ಇದು ನೂರೆಂಟು ಸುಳಿಗಳ ಸಾಗರ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ನೋವನ್ನು ನಲಿವನ್ನು ಲೆಕ್ಕ ಇಡುವ
ಬೇಕಾರು ತಕರಾರು ಈ ಪ್ರೇಮವು
ಏಕಾಂತದಲ್ಲೂನು ಪಕ್ಕ ಇರುವ
ನೆನಪಿನ ತವರೂರು ಈ ಪ್ರೇಮವು
ಇದ್ದಂತಯೆ ಮನ ಹಾಯಾಗಿದೆ
ಬೇಕೇನು ವಿರಹದ ಬೇಸರ
ಪ್ರೀತಿಯಲಿ ಯಲ್ಲ ಮಾಫ಼ು
ಪ್ರೀತಿಯಲಿ ಹೃದಯ ಸಾಫ಼ು
ಪ್ರೀತಿಸುವ ಕಣ್ಣಲ್ಲಿ ನಗವನು ಚಂದಿರ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ...

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ..

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ
ನಿನಗಾಗಿಯೇ ನಿನಗಾಗಿಯೇ ಕಿರುನೋಟವು ಸರಿದಾಡಿದೆ
ಮರುಳಾಗಿ ನಾನು ಮರೆ ಮಾಚುತಿರಲು ತೆರೆಯನ್ನು ತೆರೆದು ಬರೆಲಾರೆಯೇನು
ಬೆಳಕಲ್ಲಿ ಜೀವ ತುಸು ನಾಚುತಿರಲು ಬೆಳದಿಂಗಳನ್ನು ತರಲಾರೆಯೇನು
||ನಿನಗಾಗಿಯೇ||
ಅಲೆಯುವ ಕಣ್ಣಿನ ಕಾಡಿಗೆ ಕರಗಲು ಕಲಕಲ ನಗುತಿದೆ ಈ ಹೂವಾ ಮಾಲೆ
ಕನಸಿನ ಕಲರವ ಸುತ್ತಲು ಕವಿದಿದೆ ನನ್ನನು ಹುಡುಕುತ ನೀ ಬಂದ ಮೇಲೆ
ಇರುಳಲ್ಲಿ ಬರೆದ ಮದರಂಗಿಯಲ್ಲಿ ರಂಗೇರುವಂತೆ ನೆನಪಾಗು ನೀನು
ನನಗಾಗಿ ನಿನ್ನ ಪರದಾಟ ಚೆಂದ, ತುಸುದೂರದಲ್ಲಿ ಇರಲಾರೆಯೇನು||೨||
||ನಿನಗಾಗಿಯೇ||
ಹೃದಯದ ಕನ್ನಡಿ ಒಲವಲಿ ಮಿನುಗಲು, ಅದರಲಿ ನಿನ್ನದೇ ಮೊಗವನ್ನು ನೋಡು
ನೆನಪಿನ ಪರಿಮಳ ಮೆಲ್ಲಗೆ ಸುಳಿಯುತ ಕಾಡದೆ ಸುಳಿದಿದೆ ಹಿತವಾದ ಹಾಡು
ಸೆರಗಲ್ಲಿ ಬೆರೆತ ಚಿತ್ತಾರದಲ್ಲಿ, ನವಿರಾದ ಸುಳಿಯ ಜರಿಯಾಗು ನೀನು
ಹಾಗೆಲ್ಲ ಈಗ ಮಾತಾಡಲಾರೆ, ಏಕಂತದಲ್ಲಿ ಸಿಗಲಾರೆಯೇನು||೨||
||ನಿನಗಾಗಿಯೇ||