Monday, December 27, 2010

ಹೇ ಮೌನಾ ಏ ಹೇ ಮೌನಾ ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ..


ಸಂಗೀತ: ವಿ.ಹರಿಕೃಷ್ಣ
ಗಾಯನ: ಶಂಕರ್ ಮಹಾದೇವನ್
ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ನನ್ನೆದೆಯ ಹೂವು ಬಿರಿವಂತೆ ಮಾಡು ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು ಅವ ಜಾರಿ ಹೋಗೊ ಮುನ್ನ
ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ
ನೀ ಮಾತನಾಡು ಎನ್ನಾ
ಓ ನೀ ಒಲವಿನ ಕಡಲನ್ನು ಈಜುತ ದಾಟುವೆಯಾ
ಅಥವ ಆಳದಲಿ ಮುಳುಗಿ ಮುತ್ತುಗಳ ಆಯುವೆಯಾ
ಓ ನೀ ನೆನಪಿನ ತೀರದಲಿ ಸುಮ್ಮನೆ ನಡೆಯುವೆಯಾ
ಅಥವ ಮರಳಿನಲಿ ಮುದ್ದು ಹೆಸರನ್ನು ಬರೆಯುವೆಯಾ
ಈ ಭೂಮಿ ಗಂಧ ಈ ಭಾವ ಬಂಧ ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ ನೀ ಬಂದು ಹೋದೆ ಏನು
ಹೇ ಮೌನಾ ...
ಓ ನೀ ಕನಸಿನ ಬೀದಿಯಲಿ ಅರಸುತ ಅಲೆಯುವೆಯಾ
ಅಥವ ಬಾಗಿಲನು ತೆರೆದು ಹೊಸ್ತಿಲಲಿ ಕಾಯುವೆಯಾ
ಓ ನೀ ಒಲವಿನ ಚಿಹ್ನೆಗಳ ಅಳಿಸದೆ ಉಳಿಸುವೆಯಾ
ಅಥವ ನೋವುಗಳ ಕಣ್ಣು ತಪ್ಪಿಸುತ ಸಹಿಸುವೆಯಾ
ಆಕಾಶದಲ್ಲಿ ತಾರೆಗಳ ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು ನನ್ನವರು ಇಲ್ಲಿ ಯಾರು
ಹೇ ಮೌನಾ ...

No comments:

Post a Comment