Monday, December 27, 2010

ಮನಸಲ್ಲಿ ಮಾತಾಡುವೆ ನಿನ್ನೊ೦ದಿಗೆ ಮನಸಲ್ಲೇ ಮಾತಾಡುವೆ

ಸಂಗೀತ: ಮನೋ ಮೂರ್ತಿ
ಗಾಯನ:ಶ್ರೇಯಾ ಘೋಶಾಲ್
ಮನಸಲ್ಲಿ ಮಾತಾಡುವೆ ನಿನ್ನೊ೦ದಿಗೆ ಮನಸಲ್ಲೇ ಮಾತಾಡುವೆ
ಕನಸಲ್ಲಿ ಓಡಾಡುವೆ ನಿನ್ನೊ೦ದಿಗೆ ಕನಸಲ್ಲೇ ಓಡಾಡುವೆ
ಏಕಾ೦ತವೆ ಸಲ್ಲಾಪವು
ಅನುರಾಗದ ಆಲಾಪವು
ನಿನಗೆ೦ದೆ ನಾ ಹಾಡುವೆ
ಓ ನಿನಗೆ೦ದೆ ನಾ ಹಾಡುವೆ
ಮನಸಲ್ಲಿ ಮಾತಾಡುವೆ ನಿನ್ನೊ೦ದಿಗೆ ಮನಸಲ್ಲೇ ಮಾತಾಡುವೆ
ಎಲ್ಲೆಲ್ಲಿಯೂ ನೀ ಅಲೆಯುತ ಈ ದಾರಿಯ ಮರೆತ೦ತಿದೆ
ಎಲ್ಲಿ೦ದಲೊ ನೀನನ್ನನು ಪಿಸುಮಾತಲಿ ಕರೆದ೦ತಿದೆ
ನೀನಿಲ್ಲದೆ ದಿಗಿಲಾಗಿದೆ
ಬೆಳದಿ೦ಗಳು ಹಗಲಾಗಿದೆ
ಇನ್ನೆ೦ದು ನೀ ಕಾಣುವೆ
ಇನ್ನೆ೦ದು ನೀ ಕಾಣುವೆ
ಮನಸಲ್ಲಿ ಮಾತಾಡುವೆ ನಿನ್ನೊ೦ದಿಗೆ ಮನಸಲ್ಲೇ ಮಾತಾಡುವೆ
ಕೈಹಿಡಿಯುತ ಮುನ್ನೆಡೆಸಿದೆ ಸವಿನೆನಪಿನ ಸಮ್ಮೋಹಿನಿ
ಮೈಮನಗಳ ಆವರಿಸಿದೆ ನಿನ್ನೊಲವಿನ ಸ೦ಜೀವಿನಿ
ಈ ಬಿನ್ನಹ ತಲುಪಿಲ್ಲವೆ
ನೋವಿಲ್ಲದೆ ಒಲವಿಲ್ಲವೆ
ನಿನಗಾಗಿ ನಾ ಕಾಯುವೆ
ನಿನಗಾಗಿ ನಾ ಕಾಯುವೆ
ಮನಸಲ್ಲಿ ಮಾತಾಡುವೆ ನಿನ್ನೊ೦ದಿಗೆ ಮನಸಲ್ಲೇ ಮಾತಾಡುವೆ
ಕನಸಲ್ಲಿ ಓಡಾಡುವೆ ನಿನ್ನೊ೦ದಿಗೆ ಕನಸಲ್ಲೇ ಓಡಾಡುವೆ
ಏಕಾ೦ತವೆ ಸಲ್ಲಾಪವು
ಅನುರಾಗದ ಆಲಾಪವು
ನಿನಗೆ೦ದೆ ನಾ ಹಾಡುವೆ
ಓ ನಿನಗೆ೦ದೆ ನಾ ಹಾಡುವೆ
ಮನಸಲ್ಲಿ ಮಾತಾಡುವೆ ನಿನ್ನೊ೦ದಿಗೆ ಮನಸಲ್ಲೇ ಮಾತಾಡುವೆ....

No comments:

Post a Comment