Tuesday, December 28, 2010

ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ.....

ಚಿತ್ರ: ಲವ್ ಗುರು
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಜಾಶುವ ಶ್ರೀಧರ್
ಹಾಡಿದವರು:ಕಾರ್ತಿಕ್ ಮತ್ತು ಬೆನ್ನಿ
*****
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...

ನೂರೆಂಟು ರೀತಿಯ ನೆನಪಿನ ಬಳ್ಳಿ ಮೆಲ್ಲಗೆ ಮೂಡಿದೆ ಎದೆಯಲ್ಲಿ..
ಎಂದೆಂದು ಬಾಡದ ಕನಸಿನ ಹೂವು ನಿನ್ನ ಧ್ಯಾನದಲಿ ಅರಳೀ..
ಕಣ್ಣಲೇ ಮಾತಾಡುತಾ ಸರಿಯಾಗಿ ಹೇಳು ಇದು ಎನು ಅಂತಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ನಿಂತಲ್ಲಿ ಕೂತಲ್ಲಿ ಸಂತಸದಂತ ಸುಂದರ ಮೋಹಕೆ ಮರುಳಾದೆ...
ಬೇರೇನು ಬೇಕಿಲ್ಲ ನಿನ್ನನು ಕಂಡು ಎಲ್ಲಾ ತಾರೆಗಳಾ ತೊರೆದೇ...
ಮಾತನು ಮರೆಮಾಚುತಾ ಸವಿಯಾದ ಭಾವ ನಿನಗೂನು ಬಂತಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...

1 comment:

  1. I like it , ಕಣ್ರಿ ತುಂಬಾ ಚನ್ನಾಗಿದೆ

    ReplyDelete